ಐವತ್ತರ ಹೈದನಿಗೊಂದು ಗೀತೆ
ಬರವಣಿಗೆಯೆಂಬ
ಧನ್ವ ಹಿಡಿದು
ಬಂದ ಧರಾಮರ,
ನೇತಿಮಾರ್ಗವನು
ಪ್ರತಿಪಾದಿಸಿ, ತಿಮಿರತೆಗೆ
ಪ್ರತಿಬಂಧಕನಾಗಿ ನೇರ
ನಡೆಯಿಂದ ನುತನಾಗಿ,
ಬೆಳಗಿನ ರವಿಗೆ ಬಾಯ್ಗೂಟವಿಡುತ
ಬಂದ ಬೆಳಗೆರೆ
ರವಿ ಕಾಣದ ಕೊತ್ತಣವ,
ಬಿಳಿಹಾಳೆಯ ಮೇಲೆ
ಧವಳಿಸುವ ಪದಗಳ
ಜೋಡಿಸುತ, ಜಂಕಿಸುತ
ಧೂಸರದ ದಾಡಿಯಲಿ ಧಾವಿಸಿ
ಬಂದ ಬೆಳಗೆರೆ
ಈ ಧುರ್ಯನಿಗೀಗ ಐವತ್ತರ ವಸಂತ
ಅವರ ಧೀವಸಭರಿತ, ಮೊಣಚಾದ
ಬರಹ ಚಿರಕಾಲ ಪ್ರರೋಮಂಥಿಸಲಿ
ಪೂರ್ಣವಿ-ರಾಮ / ಕಲಗಾರು
2 comments:
ಅದ್ಭುತವಾಗಿ ಬರೆದಿದ್ದೀರಿ. ನೀವು ರವಿ ಸಾರ್ ಬರೆದಿರುವ "ಹೇಳಿ ಹೋಗೋ ಕಾರಣ" ಓದಿದೀರಾ?
ಅಂದ ಹಾಗೆ ನನ್ನ ಬ್ಲಾಗ್ "ಚುರ್ ಮುರಿ" ಗೆ ಭೇಟಿ ಕೊಟ್ಟು ಮೆಚ್ಚುಗೆಯ ಮಾತುಗಳನಾಡಿದಕ್ಕೆ ವಂದನೆಗಳು. ಹೊಸ "post" ಬರೆದಿದ್ದೇನೆ. ಸಮಯ ಸಿಕ್ಕಾಗ ನೋಡಿ.
ಖಂಡಿತಾ ಓದಿದ್ದೇನೆ. ಅಷ್ಟೇ ಅಲ್ಲ ಅವರ ಪ್ರತೀ ಕಥೆಗಳನ್ನೂ ಕಷ್ಟ ಪಟ್ಟು ಅರಗಿಸಿಕೊಂಡಿದ್ದೇನೆ.
ಅದರ ಸಲುವಾಗಿ ಈ ಪುಟ್ಟ ಕವನ ಅಷ್ಟೇ....
ಬಂದುಹೋಗಿದ್ದಕ್ಕೆ ತುಂಬಾ ಥ್ಯಾಂಕ್ಸ್
Post a Comment