Wednesday, March 12, 2008

ಪ್ರಶ್ನೆಯಾಯಿತು ಮಾಯಾಮೃಗ....!

ಪ್ರಶ್ನೆಯೆಂಬ ಮರೀಚಿಕೆ

ಉತ್ತರ ದೊರೆತಿಲ್ಲ,
ಹುಡುಕಾಟವೂ ನಿಂತಿಲ್ಲ;
ಪ್ರಶ್ನೆಯೂ ಮರೆತಿಲ್ಲ

ತಾಕಲಾಟದ ತಾಂಡವ
ತಾಂಬೇಲುವನ್ನೇ ಮೀರಿಸುವ ಜಡ
ಪರದಾಟದ ಪರಿಧಿಯಲಿ
ಪರಿವೇಶ, ಪರಿ ಪರಿ ವೇಷ
ಉತ್ತರ ದೊರೆತಿಲ್ಲ

ಪರಿಪಕ್ವವಲ್ಲ, ಪರಿತೋಷ ಲಭಿಸಿಲ್ಲ
ಆಗೊಬ್ಬ ಬಂದ ಆಪದ್ಬಾಂಧವ
ಹೆಸರು ಕಾನನ್ ಡಯಲ್
ಅವನೊಬ್ಬ ಸೂತ್ರಧಾರ
ಆದರೂ ಉತ್ತರ ದೊರೆತಿಲ್ಲ

ಜೊತೆಗಿದ್ದರು ಪಾತ್ರಧಾರಿಗಳು
ಶರ್ಲಾಕ್ ಹೋಮ್ಸ್, ಪೆರಿ ಮೆಷನ್
ಪರಿಚಾರಕರಂತೇ ಹಿಂಬಾಲಿಸಿದೆ
ಅವರಿಂದಲೂ ಅದೇ ಉತ್ತರ, ನಿರುತ್ತರ
ಇನ್ನೂ ಉತ್ತರ ದೊರೆತಿಲ್ಲ;
ಪ್ರಶ್ನೆಯೂ ಮರೆತಿಲ್ಲ...




ಪೂರ್ಣ ವಿ-ರಾಮ / ಕಲಗಾರು





2 comments:

ತೇಜಸ್ವಿನಿ ಹೆಗಡೆ said...

ಎಷ್ಟೋ ಪ್ರೆಶ್ನೆಗಳನ್ನೆಬ್ಬಿಸುವಂತಿದೆ ಕವನ.. ತುಂಬಾ ಚೆನ್ನಾಗಿದೆ. ಇಂತಹ ಕವನಗಳಿಗೆ ಪೂರ್ಣ-ವಿರಾಮ ಹಾಕದಿರಿ. ಅಂದಹಾಗೆ ಒಂದು ಚಿಕ್ಕ ಸಲಹೆ.. ತಪ್ಪಿದ್ದರೆ ಕ್ಷಮಿಸಿ.."ಪರಿತೋಷ" ದ ಬದಲು "ಪಾರಿತೋಷ"ವಾಗ ಬೇಕಿತ್ತೇನೋ ಅಲ್ಲವಾ?

ಪೂರ್ಣ ವಿ-ರಾಮ said...

ಹೆಗಡೆಯವರೇ,

ನಮಸ್ತೆ


ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದ; ಸಲಹೆಗೂ ಕೂಡ. ಅಂದಹಾಗೆ, ಪರಿತೋಷ ಎಂದರೆ ಇನ್ನೂ ಸಂತುಷ್ಟನಾಗಿಲ್ಲ, ತೃಪ್ತಿ ಲಭಿಸಿಲ್ಲ ಎಂಬ ಅರ್ಧವಿದೆ. ಅದೇ ರೀತಿ ಪಾರಿತೋಷ ಪದ ಬಳಸಿದರೂ ತಪ್ಪೇನಿಲ್ಲ. ಏಕೆಂದರೆ ಕವಿತೆ ಅವರವರ ಭಾವಕ್ಕೆ ಅದರದೇ ಆದ ಅರ್ಥ ಕೊಡುತ್ತದೆ.

ಥ್ಯಾಂಕ್ಯೂ.. ಆಗಾಗ ಬಂದು ತಿಳಿಹೇಳುತ್ತಿರಿ....