Thursday, January 29, 2009
ಆಪ್ತಮಿತ್ರನ ಜತೆ ಆಪ್ತ ಸಂವಾda...
ಇತ್ತೀಚೆಗೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಮಾತಿಗೆ ಸಿಕ್ಕಿದ್ದರು. ಕನ್ನಡ ಕುಳ್ಳ ಎಂದೇ ಖ್ಯಾತರಾಗಿರುವ ಅವರು ಜತೆಗೆ ಮಾತಿಗೆ ಕುಳಿತರು. ಅಲ್ಲಿ ಆಯ್ದ ಕೆಲ ಪ್ರಶ್ನೋತ್ತರಗಳ ರೂಪ ನಿಮ್ಮ ಮುಂದಿದೆ...
ಕನ್ನಡದಲ್ಲಿ ರೀಮೇಕ್ ಸಿನಿಮಾ ಅನಿವಾರ್ಯವಾ?
ಸ್ವಾಮಿ, ಈಗ ಕಾಲ ಬದಲಾಗಿದೆ. ರಾಜ್‌ಕಪೂರ್, ಸುನಿಲ್ ದತ್... ಅಷ್ಟೇ ಏಕೆ, ಇತ್ತೀಚೆಗೆ ಅಮೀರ್ ಖಾನ್ ಕೂಡ ಅದನ್ನೇ ಮಾಡಿದ್ದಾರೆ. ಘಜನಿ ಎಷ್ಟು ಕೋಟಿ ಕಮಾಯಿಸಿದೆ ಗೊತ್ತಾ? ಪ್ರಚಾರಕ್ಕೆ ರಸ್ತೆಯಲ್ಲಿ ನಿಂತು ಕ್ಷೌರ ಮಾಡಿದ್ದಾರೆ. ಆ ಮೇಕು ಈ ಮೇಕು ಎಂಬುದು ಮುಖ್ಯವಲ್ಲ, ಮನರಂಜನೆ ಬೇಕು. ಅದು ಎಲ್ಲಿ ಸಿಕ್ಕರೆ ಏನಂತೆ? ನಾನಂತೂ ಮುಲಾಜಿಲ್ಲದೇ ಮಾಡುತ್ತೇನೆ. ಹಾಗಂತ ಸ್ವಮೇಕ್ ಮಾಡುವುದಿಲ್ಲ ಎಂದಲ್ಲ.
ನಿಮ್ಮನ್ನು ರೀಮೇಕ್ ಸರದಾರ ಅಂತಾರಂತೆ?
ಅನ್ನಲಿ ಬಿಡಿ, ನಾನು ಮುಳುಗಿ ಹೋಗುವ ಕಾಲದಲ್ಲಿ ಅಂಬಲಿ ಉಣಿಸಿದ್ದು ಆಪ್ತಮಿತ್ರ. ಆದರೆ ಅಷ್ಟಕ್ಕೇ ನಾನು ಸೀಮಿತವಾಗಿಲ್ಲ. ನಿರ್ದೇಶನ, ನಿರ್ಮಾಣ, ನಟನೆ ಎಲ್ಲ ಮಾಡಿದ್ದೇನೆ. ೧೮ ವರ್ಷ ಅನ್ನಕ್ಕೂ ಗತಿ ಇಲ್ಲದೆ ನಕ್ಷತ್ರ ಎಣಿಸಿದ್ದೇನೆ. ನಂತರ ಮತ್ತೆ ಭಲೇ ಕುಳ್ಳ ಎನಿಸಿಕೊಂಡೆ. ಈಗ ಸುಖವಾಗಿದ್ದೇನೆ, ಮತ್ತೆ ಸಿನಿಮಾ ಮಾಡುತ್ತೇನೆ. ಆದರೆ ಇನ್ನೊಂದು ಆಪ್ತಮಿತ್ರ ಅಂತೂ ಅಲ್ಲ. ಎಲ್ಲವನ್ನೂ ಮಾಡಬಹುದು, ಆದರೆ ಸೌಂದರ್ಯಾ!?!
ಆಪ್ತಮಿತ್ರ ಆಗಿ ೫ ವರ್ಷ ಆಯ್ತು, ಗ್ಯಾಪ್ ಏಕೆ?
ಆ ಪ್ರಶ್ನೆಯನ್ನು ಇತ್ತೀಚಿನ ನಾಯಕರಿಗೆ ಕೇಳಿ. ನನಗೆ ಸಿನಿಮಾ ಮಾಡಲು ಇಷ್ಟು ವರ್ಷ ಅಂತರ ಬೇಕಿರಲಿಲ್ಲ. ಐವತ್ತು ವರ್ಷದಿಂದ ಅದೇ ಬದುಕು. ಈಗಿನವರು ಬಹಳ ‘ಬುದ್ದಿವಂತ’ರು. ಎಲ್ಲಿ ಕಾಲ್‌ಶೀಟ್ ಕೇಳಿ, ಕಿರಿಕಿರಿ ಮಾಡುತ್ತಾರೋ ಎಂದು ಫೋನ್ ಸ್ವಿಚ್‌ಆಫ್ ಮಾಡಿಕೊಳ್ಳುತ್ತಾರೆ. ಕಡೇ ಪಕ್ಷ ವಿಷ್ಣುವರ್ಧನ್ ಆದರೂ ಯೋಚಿಸಬಹುದಿತ್ತು. ಎಲ್ಲಿರಿಗೂ ‘ಸ್ವಾಭಿಮಾನ’. ಅದೇ ಮಲಯಾಳಂ ಚಿತ್ರರಂಗ ನೋಡಿ... ಇತ್ತೀಚೆಗೆ ದಿಲೀಪ್ ಎನ್ನುವ ನಾಯಕ ಸಕ್ಸಸ್ ಇಲ್ಲದೇ ಕಾಲಿ ಕುಳಿತಿದ್ದ. ಅವನನ್ನು ಗೆಲ್ಲಿಸಲು ೧೨ ನಾಯಕರು ಒಟ್ಟಿಗೆ ಸಿನಿಮಾ ಮಾಡಿದರು. ಅದು ಸೂಪರ್‌ಹಿಟ್!
ಕನ್ನಡ ಚಿತ್ರರಂಗಕ್ಕೆ ೭೫ ವರ್ಷ, ಏನನ್ನಿಸುತ್ತಿದೆ?
ಹೆಮ್ಮೆಯಿದೆ. ಆದರೂ ಅಡಿಪಾಯಕ್ಕೆ ಬೆನ್ನಾಗಿ ನಿಂತವರಿಗೆ ಬೆಲೆ ಸಿಕ್ಕಿಲ್ಲ, ಸಿಗುತ್ತಿಲ್ಲ ಎಂಬ ನೋವೂ ಇದೆ. ಈಗಲಾದರೂ ಅಂಥವರ ಬೆವರು ಮುತ್ತಾಗಲಿ. ಹದಿನೈದು ದಿನ ಉದ್ಯಮಕ್ಕೆ ರಜೆ ಇರುತ್ತೆ. ಇರಲಿ, ಸಂಭ್ರಮಿಸೋಣ. ಇದು ನಮ್ಮ ಮನೆ. ನಮ್ಮ ಹೊಟ್ಟೆಗೆ ಹಿಟ್ಟು ಕೊಟ್ಟವರು ಪ್ರೇಕ್ಷಕರು. ಅವರನ್ನು ರಂಜಿಸೋಣ. ನಮ್ಮಿಂದಾದ ಕೈಂಕರ್ಯ ಮಾಡಿ, ಋಣ ತೀರಿಸಿಕೊಳ್ಳೋಣ.
ಸಂಭ್ರಮದ ಖುಷಿ ಹಂಚಿಕೊಳ್ಳಿ...
ಖುಷಿ ಪಡುವ ಮುನ್ನ ವಾಸ್ತವದ ಬಗ್ಗೆ ಒಮ್ಮೆ ಅವಲೋಕಿಸಬೇಕು. ೭೫ನೇ ವರ್ಷದಲ್ಲಿ ೨೫ ಚಿತ್ರವೂ ಗೆಲ್ಲಲಿಲ್ಲ. ನೂರರಲ್ಲಿ ಮೂರು ಮಾತ್ರ ಹಿಟ್. ಕಾರಣ ಕೆದಕಿ, ಕಿತ್ತೊಗೆಯಬೇಕು. ಸಿನಿಮಾವನ್ನು ಮಕ್ಕಳಂತೆ ಪ್ರೀತಿಸಬೇಕು. ಕಥೆಗಾರರಿಗೆ ಬೆಲೆ ಸಿಗಬೇಕು. ಅದ್ಧೂರಿತನದ ಹೆಸರಿನಲ್ಲಿ ದುಂದುವೆಚ್ಚ ನಿಲ್ಲಿಸಬೇಕು. ಸೃಜನ ಶೀಲ ನಿರ್ಮಾಪಕರು ಮಾತ್ರ ಬರಬೇಕು. ಕೊನೇ ಪಕ್ಷ ಇವುಗಳಲ್ಲಿ ಒಂದಾದರೂ ಜಾರಿಯಾಗಬೇಕು!
ಪೂರ್ಣ ವಿ-ರಾಮ ಕಲಗಾರು
ಝಂಡಾ ಊಂಚಾ ರಹೇ ಹಮಾರಾ
ಭಾರತದ ಮೊದಲ ಸ್ವಾತಂತ್ರ್ಯೋತ್ಸವ
ಜನವರಿ ೨೬. ಭಾರತೀಯರು ತಮ್ಮದೇ ಆದ ಸಂವಿಧಾನ ಅಂಗೀಕರಿಸಿ ಸರ್ವ ತಂತ್ರ ಸ್ವತಂತ್ರ್ಯ ಗಣರಾಜ್ಯವಾಗಿ ಘೋಷಿಸಿಕೊಂಡು ವಿಶ್ವ ಮಾನ್ಯತೆ ಪಡೆದ ದಿನ.ರಾಷ್ಟ್ರ ಇತಿಹಾಸದ ಈ ಅವಿಸ್ಮರಣೀಯ ಘಟನೆ ಜನಮಾನಸದಿಂದ ಮರೆಯಾಗದಿರಲು ರಾಷ್ಟ್ರೀಯ ಉತ್ಸವಗಳಲ್ಲಿ ಗಣರಾಜ್ಯೋತ್ಸವ ದಿನಕ್ಕೆ ಮಹತ್ವದ ಸ್ಥಾನ.ಆದರೆ ಜನವರಿ ೨೬ರ ಹಿರಿಮೆ ಇಷ್ಟೇ ಅಲ್ಲ. ಅದು ಭಾರತದ ಮೊದಲ ಸ್ವಾತಂತ್ರ್ಯೋತ್ಸವ ಆಚರಣೆಗೊಂಡ ದಿನ. ರಾಷ್ಟ್ರದಾದ್ಯಂತ ಜನರು ನಾಡಗುಡಿ ಏರಿಸಿ ಝಂಡಾ ಊಂಚಾ ರಹೇ ಹಮಾರಾ ಎಂದು ಹಾಡಿ ನಲಿದಾಡಿದ ದಿನ.
ಕಾಂಗ್ರೆಸ್‌ನ ಧ್ಯೇಯವು ಪೂರ್ಣ ಸ್ವರಾಜ್ಯ ಅಥವಾ ಸಂಪೂರ್ಣ ಸ್ವಾತಂತ್ರ್ಯವಾಗಿರಬೇಕೆಂದು ತರುಣ ಗುಂಪಿನ ಆತುರ. ಕ್ರಾಂತಿಕಾರ ಮನೋಭಾವದವರಿಗಂತೂ ಮೊದಲಿನಿಂದಲೂ ಪರಕೀಯ ಪ್ರಭುತ್ವವನ್ನು ನಿರ್ಮೂಲನಗೊಳಿಸಬೇಕೆಂಬ ಹಠ. ಬ್ರಿಟಿಷರು ತಾವಾಗಿಯೇ ರಾಷ್ಟ್ರ ಬಿಟ್ಟ ತೆರಳುತ್ತಾರೆ ಎಂಬ ಕಾಂಗ್ರೆಸಿನ ವಿಶ್ವಾಸ ಕರಗಲಾರಂಬಿಸಿತ್ತು. ಸ್ವಾತಂತ್ರ್ಯದ ತಳಮಳ ರಾಷ್ಟ್ರದ ದಶ ದಿಕ್ಕುಗಳಿಂದಲೂ ವ್ಯಕ್ತಗೊಳ್ಳತೊಡಗಿತು..ಶಕ್ಯವಾದರೆ ಸಾಮ್ರಾಜ್ಯದಲ್ಲಿ ಅಗತ್ಯವಾದರೆ ಅದರ ಹೊರೆಗೆ ಎಂಬ ಅನಿಶ್ಚಿತ ಆಕಾಂಕ್ಷೆಗೆ ದೇಶದಲ್ಲಿ ಆಸರೆ ಇಲ್ಲದಂತಾಗಿ ಸರ್ವತಂತ್ರ ಸ್ವತಂತ್ರ್ಯದ ಬೃಹತ್ ವೃಕ್ಷ ಆಳವಾಗಿ ಬೇರೂರಿ ಚಿಗುರಿ ಎಲ್ಲೆಲ್ಲಿಯೂ ಕಾಣಲಾರಂಬಿಸಿತ್ತು. ಹಿರಿಯ ಮುಂದಾಳುಗಳಲ್ಲಿ ಸರಕಾರದ ಹೊಣೆಯಿಲ್ಲದ ಅನ್ಯಾಯದ ಆಳ್ವಿಕೆಯನ್ನು ಸೈರಿಸಲಾಗದೆ ತರುಣರ ಹಂಬಲಕ್ಕೆ ಬೆಂಬಲ ನೀಡುವ ಒಲವು ಒತ್ತರಿಸಿತ್ತು. ನಾಡಿನ ಸ್ವಾತಂತ್ರ್ಯ ಸಮರದ ನಾವೆಯನ್ನು ಜಾಣ್ಮೆಯಿಂದ ನಡೆಸುತ್ತಿರುವ, ಎಲ್ಲಾ ಮನೋಭಾವದವರನ್ನೂ ಒಂದೇ ತೂಕದಲ್ಲಿ ನೆಲೆ ನಿಲ್ಲಿಸಿದ ಮಹಾತ್ಮ ಗಾಂಯವರಿಗೆ ಭಾರತೀಯರ ಈ ಹೊಯ್ದಾಟ ಅರ್ಥವಾಗಿತ್ತು. ಅವರು ಲಾಹೋರಿನ ಕಾಂಗ್ರೆಸ್ಸಿನ ಸಭೆಯಲ್ಲಿ ಪೂರ್ಣ ಸ್ವರಾಜ್ಯದ ಧ್ಯೇಯಕ್ಕೆ ಸಂಪೂರ್ಣ ಸಮ್ಮತಿ ವ್ಯಕ್ತಪಡಿಸಿದರು. ತರುಣರ ಅಪೇಕ್ಷೆಗೆ ಹಿರಿಯರು ಒತ್ತಾಸೆಯಾದರು. ಇವರಲ್ಲರಿಗೂ ಮಹಾತ್ಮರು ಮುಂದಾಳಾಗಿ ಮಹಾತ್ಮ ಗಾಂಜಿಯವರು ಹೆಗಲುಕೊಟ್ಟರು.ಆದರೆ ಗಾಂಜಿಯವರು ಧ್ಯೇಯ ಧೋರಣೆಗಳನ್ನು ನಿರ್ಣಯಿಸಿ ಸುಮ್ಮನೆ ಕೂರುವ ಜಾಯಮಾನದವರಲ್ಲ. ದ್ಯೇಯಕ್ಕೆ ತಕ್ಕ ದುಡಿಮೆ ಇಲ್ಲದಿದ್ದರೆ ಧ್ಯೇಯ ದರ್ಶನವಾಗುವುದಿಲ್ಲ ಎಂಬುದು ಅವರ ಅರಿವು.ಆದ್ದರಿಂದ ದೇಶದಲ್ಲಿ ಸ್ವಾತಂತ್ರ್ಯದ ತಳಮಳ ಎಷ್ಟು ಆಳವಿದೆ,ಎಷ್ಟು ತೀವ್ರವಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬಯಸಿದರು.
ಈ ಹಿನ್ನೆಲೆಯಲ್ಲಿ ೧೯೩೦ನೇ ಜನವರಿ ೨೬ನೇ ದಿನವನ್ನು ಸ್ವಾತಂತ್ರದಿನವೆಂದು ಅಖಿಲ ಹಿಂದುಸ್ಥಾನದಲ್ಲಿ ಆಚರಿಸ ಬೇಕೆಂದೂ, ಎಲ್ಲೆಲ್ಲಿಯೂ ರಾಷ್ಟ್ರ ಧ್ವಜ ಹಾರಿಸಿ,ಸಭೆ ಸೇರಿ ಸ್ವಾತಂತ್ರ್ಯದ ನಿರ್ಣಯವನ್ನು ಓದಿ,ಅದಕ್ಕೆ ಸರ್ವರ ಸಮ್ಮತಿಯನ್ನೂ,ಪ್ರತಿಜ್ಞೆಯನ್ನೂ ಪಡೆಯಬೇಕೆಂದೂ ಕಾಂಗ್ರೆಸ್ಸಿನ ಕಾರ್ಯಕಾರಿ ಮಂಡಲಿ ಪ್ರಕಟಿಸಿತು. ಅದರಂತೆ ರಾಷ್ಟ್ರದಾದ್ಯಂತ ೧೯೩೦ನೇ ಜನವರಿ ೨೬ರಂದು ಸ್ವಾತಂತ್ರ್ಯ ದಿನಾಚರಣೆ ಆಚರಣೆಗೊಂಡಿತು. (ಅಂದಿನ ವರದಿಯಂತೆ)
ಅಂದು ಎಲ್ಲೆಲ್ಲಿಯೂ ಸಂತೋಷz ಸುಗ್ಗಿ. ಸಾರಣೆ ಕಾರಣೆಗಳಿಂದ ಅಂಗಳಗಳು ಶೋಭಿಸುತ್ತಿದ್ದವು. ತಳಿರು ತೋರಣಗಳಿಂದ ಗುಡಿ ಗುಂಡಾರಗಳು, ಮನೆ ಮಠಗಳು ಮಂಗಲಮಯವಾಗಿ ಸಿಂಗಾರಗೊಂಡಿದ್ದವು. ಅನೇಕ ಸ್ಥಳಗಳಲ್ಲಿ ಬೆಳಿಗ್ಗೆ ಗೌರವದಿಂದ ಏರಿಸಲ್ಪಟ್ಟ ಸ್ವಾತಂತ್ರ್ಯದ ಗುಡಿಯು ಗುಡಿಗೋಪುರಗಳ ಮೇಲೆ ಪಟಪಟನೆ ಹಾರಾಡಿ ಆಳರಸರ ಎದೆಯನ್ನು ಅಳುಕಿಸಿ ತಲ್ಲಣಗೊಳಿಸಿತು.ಪೇಟೆ ಪಟ್ಟಣಗಳಲ್ಲಿ ನಡೆದ ಪ್ರಚಂಡ ಮೆರವಣಿಗೆಗಳು ಸ್ವತಂತ್ರ್ಯ ಸೇನೆಯ ರಭಸ, ಗೌರವ ಗಾಂಭೀರ್ಯಗಳನ್ನು ಸೂಚಿಸುತ್ತಿದ್ದವು. ಎಲ್ಲಕಡೆಯ ಕಾರ್ಯಕ್ರಮಗಳು ಒಂದೇ ಮಾದರಿಯಲ್ಲಿತ್ತು. ತರುಣರು ಎಲ್ಲೆಲ್ಲಿಯೂ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಖಾದಿಯನ್ನು ವಿತರಿಸಿದರು.
ಮೈಸೂರು ಸಂಸ್ಥಾನದಲ್ಲಿ ಎಲ್ಲಾಜಿಲ್ಲೆಯ ಮುಖ್ಯಾಕಾರಿಗಳು ಆದಿನ ಪೋಲೀಸ್ ಕಾಯಿದೆಯ ೩೯,೪೫,೪೬,ಮತ್ತು ೧೪೪ನೇ ಕಲಮುಗಳನ್ನು ಕಾರ್ಯರಂಗಕ್ಕಿಳಿಸಿದ್ದರು. ಪೋಲೀಸರು ಬೆತ್ತ, ಬಡಿಗೆ, ರಿವಾಲ್ವರುಗಳನ್ನು ಹಿಡಿದು ಸ್ವಾತಂತ್ರ್ಯೋತ್ಸವವನ್ನು ಭಂಗಗೊಳಿಸಲು ಯತ್ನಿಸಿದರು. ಬೀದಿ ಬೈಲುಗಳನ್ನು ಸುತ್ತಾಡಿ ಜನಜಂಗುಳಿಯ ಮೇಲೆ ಬಿದ್ದು ನಾಡಗುಡಿಯನ್ನು ಕಿತ್ತೊಗೆದರು. ಚಿಕ್ಕ ಪುಟ್ಟ ಕಂದಮ್ಮಗಳ ಮೇಲೆ ಕೈ ಮಾಡಿ ರಾಷ್ರದ್ವಜವನ್ನೂ,ಟೊಪ್ಪಿಗೆಗಳನ್ನೂ ಕಸಿದುಕೊಂಡರು. ಆದರೆ ಸರಕಾರದ ಬಿಗಿ ಬಂದೋವಸ್ತ್ ಇದ್ದರೂ ಸ್ವಾತಂತ್ರ್ಯ ದಿನಾಚರಣೆ ನಿಲ್ಲಲಿಲ್ಲ.
ಕರ್ನಾಟಕದ ಎಲ್ಲಾ ಸ್ಥಳಗಳಲ್ಲಿಯೂ ಸ್ವಾತಂತ್ರ ದಿನಾಚರಣೆ ನಡೆಯಿತು. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಕೊಡಗು, ಮಂಗಳೂರು, ಸಿದ್ದಾಪುರ, ಅಂಕೋಲಾ ಸೇರಿದಂತೆ ಮಹತ್ವದ ಪ್ರತಿಯೊಂದು ಊರಿನಲ್ಲಿಯೂ ಸಭೆಗಳಾದವು. ಬೆಂಗಳೂರಿನಲ್ಲಿ ಸಿ.ವಿ.ನರಸಿಂಹ ಅಯ್ಯಂಗಾರರ ಮನೆಯಲ್ಲಿ ಶ್ರೀ ಕೆ.ಟಿ.ಭಾಷ್ಯಂ ಅವರಿಂದ ಧ್ವಜಾರೋಹಣ ನಡೆಯಿತು. ಮೈಸೂರಲ್ಲಿ ಅಗರಂ ರಂಗಯ್ಯ ಮತ್ತು ರಾಜಗೋಪಾಲ, ತುಮಕೂರಿನಲ್ಲಿ ಕೆ ರಂಗಯ್ಯ ಅಯ್ಯಂಗಾರ್, ಟಿ.ಸುಬ್ರಮಣ್ಯಂ ತಮಗೆ ವಿಸಿದ ೩೯ನೇ ಕಲಂ ಅನ್ನು ಧೈರ್ಯದಿಂದ ಕ್ಕರಿಸಿ ನಾಡಗುಡಿಯನ್ನು ಏರಿಸಿ ಸ್ವಾತಂತ್ರ್ಯೋತ್ಸವ ಜರುಗಿಸಿದರು. ಬೆಂಗಳೂರಿನಲ್ಲಿ ಕೆಲವರು ತಗಡೂರು ರಾಮಚಂದ್ರರಾಯರ ಮುಂದಾಳ್ತತನದಲ್ಲಿ ಜನವರಿ ೨೫ರಂದೇ ನಾಡಗುಡಿಯನ್ನು ಏರಿಸಿ ಕಾಯಿದೆಗೆ ಸವಾಲೊಡ್ಡಿದರು.ದೊಡ್ಡ ಬಳ್ಳಾಪುರದಲ್ಲಿ ಜನವರಿ ೨೫ನೇ ತಾರಿಖಿನಂದಲೇ ೧೪೪ನೇ ಕಲಂ ಜಾರಿಗೊಳಿಸಲಾಗಿತ್ತು. ಆದರೂ ಜನರು ೨೬ನೇ ತಾರೀಖಿನಂದು ಗೊತ್ತುಪಡಿಸಿದ ಸ್ಥಳದಲ್ಲಿ ದ್ವಜಾರೋಹಣ ನೆರವೇರಿಸಲು ಯತ್ನಿಸಿದರು. ಪೊಲೀಸರು ರಾಷ್ಟ್ರ ಧ್ವಜ ಹಾಗೂ ಗಾಂಜಿಯ ಭಾವಚಿತ್ರವನ್ನು ಕಸಿದುಕೊಂಡು, ಸಭೆ ನಡೆಯಗೊಡಲಿಲ್ಲ. ಶೃಂಗೇರಿ ಹಾಗೂ ಮೈಸೂರು ಸಂಸ್ಥಾನದ ಅನೇಕ ಕಡೆಗಳಲ್ಲಿ ಅಕಾರಿಗಳಿಂದ ಬಹಿರಂಗ ಕಾರ್ಯಕ್ರಮಕ್ಕೆ ತಡೆಯುಂಟಾದರೂ ಖಾಸಗಿ ರೀತಿಯಲ್ಲಿ ಮನೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಾನೂನು ಉಲಂಘಿಸಿದರೆಂದು ಅನೇಕ ಜನರ ಮೇಲೆ ಖಟ್ಲೆ ಹೂಡಲಾಯಿತು. ಅದಾಗಿ ೧೭ ವರ್ಷಗಳ ನಂತರ ರಾಷ್ಟ್ರ ಸ್ವತಂತ್ರ್ಯಗೊಂಡು ೧೯೫೨ನೇ ಜನವರಿ ೨೬ರಂದು ಗಣರಾಜ್ಯವಾಯಿತು.
ನಾವು ಮರೆತ ಧ್ವಜಗೀತೆ
ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ, ಭಾವೈಕ್ಯವನ್ನು ಪ್ರೇರೇಪಿಸುವುದರಲ್ಲಿ ದೇಶ ಭಕ್ತಿಗೀತೆಗಳಿಗೆ ಪ್ರಥಮ ಆದ್ಯತೆ. ಜನಗಣ ಮನ, ವಂದೇ ಮಾತರಂ ಗೀತೆಗಳು ಇಂದಿಗೂ ಕೇಳಿಸುತ್ತಿದ್ದರೆ ಸ್ವಾತಂತ್ರ್ಯ ಸಮರದ ಜನ ಜನರನ್ನು ಬಡಿದೆಬ್ಬಿಸಿದ ಝಂಡಾ ಊಂಚಾ ರಹೇ ಹಮಾರಾ ಗೀತೆಯನ್ನು ನಾವು ಮರೆತು ಬಿಟ್ಟಿದ್ದೇವೆ.ಮಹಾತ್ಮ ಗಾಂಯವರು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಶೈಲಿಯಲ್ಲಿ,ಧ್ವಜ ಗೀತೆ ಇರಬೇಕೆಂದು ಬಯಸಿದ್ದರು. ಅಪ್ಪಟ ದೇಶಭಕ್ತ,ಸ್ವಾತಂತ್ರ್ಯ ಸೇನಾನಿ, ಖ್ಯಾತ ಹಿಂದೀ ಕವಿ ಶ್ಯಾಮಲಾಲ್ ಗುಪ್ತ’ಪಾರ್ಷದ್ ೧೯೨೪ ರಚಿಸಿದ ವಿಜಯೀ ವಿಶ್ವ ತಿರಂಗಾ ಪ್ಯಾರಾ, ಝಂಡಾ ಊಂಚಾ ರಹೇ ಹಮಾರಾ ಗೀತೆ ಗಾಂಜಿ ಬಯಸಿದಂತೆಯೇ ಇತ್ತು. ಅದು ಧ್ವಜ ಗೀತೆಯಾಗಿ ಸ್ವೀಕಾರಗೊಂಡಿತು. ಐದು ಸಾಲುಗಳಲ್ಲಿ ಆರು ನುಡಿಗಳನ್ನು ಹೊಂದಿರುವ ಈಗೀತೆ ಸುಗಮ, ಸರಳ ಶೈಲಿಯಲ್ಲಿ ಧ್ವಜವನ್ನು ವರ್ಣಿಸುವುದಲ್ಲದೆ ನಮ್ಮ ರಾಷ್ಟ್ರ ಭಕ್ತಿಯನ್ನೂ ಶೌರ್ಯವನ್ನು ಉದಾತ್ತತೆಯನ್ನೂ ಪ್ರತಿಬಿಂಬಿಸುತ್ತದೆ. ಸ್ವಾತಂತ್ರ ಸಂಗ್ರಾಮದ ವೇಳೆ ಈ ಗೀತೆ ಇಲ್ಲದೆ ಸಭೆ, ಮೆರವಣಿಗೆಗಳು ನಡೆಯಲಿಲ್ಲ. ಈ ಗೀತೆಯಿಂದ ಅಸಂಖ್ಯಾತ ರಾಷ್ಟರ ವೀರರು ಸ್ಪೂರ್ತಿ ಪಡೆದರು. ತ್ರಿಪುರಾ ಕಾಂಗ್ರೆಸ್ ಅವೇಶನದಲ್ಲಿ ಸುಭಾಸಚಂದ್ರ ಬೋಸ್ ಒಂದು ಲಕ್ಷ ಜನರೊಂದಿಗೆ ಈ ಗೀತೆಯನ್ನು ಹಾಡಿದರು. ಸ್ವಾತಂತ್ರ್ಯ ಬಂದ ಮೇಲೆ ಕೆಲವರ್ಷ ಶಾಲಾ ಮಕ್ಕಳಿಗೆ ಈ ಗೀತೆಯನ್ನು ಕಲಿಸಿ, ಧ್ವಜಾರೋಹಣ ಕಾಲದಲ್ಲಿ ಹಾಡಿಸಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇದು ಮರೆತು ಹೋಗಿರುವುದು ಖೇದಕರ ಸಂಗತಿ.
ಪೂರ್ಣ ವಿ-ರಾಮ ಕಲಗಾರು
Subscribe to:
Posts (Atom)